Tuesday 29 March 2011

ನಿನ್ನ ಸುಪ್ತ ಕನಸುಗಳು ಬಾಡಿ ಹೋಗುವ ಹೆದರಿಕೆ

ಗೆಳತಿ,

ಗೆಳತಿ, ಮತ್ತೆ ನೆನಪಾಗುತಿದೆ , ಮಂಜಾದ ಕಣ್ಣು.. ನಿನ್ನ ಸುಪ್ತ ಕನಸುಗಳು ಬಾಡಿ ಹೋಗುವ ಹೆದರಿಕೆ ... ನಿನು...  ಪ್ರೀತಿಸದೆ ನನಗೆ ಏಕೆ ಗತಿ... ನೀ ಒಪ್ಪುವುದಾದರೆ ನಾನಾಗುವೆ ನಿನ್ನ ಸಂಗಾತಿ...
a£ÀÄß...ನಿನ್ನನ್ನು ಮರೆತು ತುಂಬಾ ದಿನವಾಗಿದೆ, ಹಾಗೆಂದು ಕೊಳ್ಳುತ್ತೇನೆ. ಮೊನ್ನೆ ತುಂಬಾನೇ ಖುಷಿಯಾಗಿದ್ದೆ, ಸುಮ್ಮನೆ ಹಾಗೆ ಸಂಜೆಯ ಹೊತ್ತಿನಲ್ಲಿ ಹೊರಗೆ ಚಹಾ ಕುಡಿಯೋಕ್ಕೆ ಹೋಗಿದ್ದೆ. ಒಂದು ಜೋಡಿ ಹಕ್ಕಿಗಳು ಆಫೀಸಿನ ಹೊರಗಡೆ ಸುತ್ತುತಿದ್ದವು. ಹುಡುಗಿಯ ಮೊಂಡು ಮುಗೂ ಆದೇಕೋ ಒಮ್ಮೆಲೇ ನಿನ್ನ ನೆನಪನ್ನು ಮತ್ತೆ ಹಸಿರಾಗಿಸಿತು. ತುಂಬಾನೇ ಪ್ರಯತ್ನ ಪಟ್ಟೆ ನೋಡಬಾರದೆಂದು ಆದರು ಮನಸ್ಸು ತಾಳಲೇ ಇಲ್ಲ, ಮನಸಿನಲಿ ಒಮ್ಮೆಲೇ ಮೇಲಿನ ಸಾಲುಗಳು ಸುಳಿದು ಹೋದವು. ಗೊತ್ತಿಲ್ಲ a£ÀÄß.. ಕೊನೆಗೂ ಒಂದು ಮಾತಂತೂ ನಿಜ , ನಮ್ಮ ಕನಸಿನ ಸಿಮೆಂಟ್ ನಿನಾಗಿದ್ದೆ, ಆದರೆ ನಾನು ಇಟ್ಟಿಗೆಯಾಗಲಿಲ್ಲ, ನಿನ್ನ ಮಾತು ಸತ್ಯ ಕಣೇ. ನನ್ನಲ್ಲಿ ಅದೇನು ಕಂಡೆ ಎಂದು ಪ್ರತಿ ಬರಿ ಕೇಳಿದಾಗ ನೀನು ಅದೇ ಹೇಳುತಿದ್ದೆ , ಏನ್ರೀ ಅದೆಷ್ಟು ಖುಷಿ ನನ್ನ ಬಾಯಿಂದ ನಿಮ್ಮನ್ನು ಹೊಗಳಿಸಿ ಕೊಳ್ಳಬೇಕು ಎನ್ನುವ ತವಕ. ಎಲ್ಲರ ಪ್ರೀತಿ ಪಯಣದಲ್ಲಿ ಪ್ರಾರಂಭ ತುಂಬಾ ಕಷ್ಟ. ಆದರೆ ನಮ್ಮ ಪ್ರೀತಿ ನೋಡು ಎಷ್ಟೊಂದು ವಿಚಿತ್ರ. ಪ್ರೀತಿ ಶುರು ಮಾಡಬೇಕಾದರೆ ಬ್ರೇಕ್ ಅಪ್ ಡೇಟ್ ಕೂಡ ಫಿಕ್ಸ್ ಮಾಡಿ ಆಗಿದೆಯೆಂದು ಎಷ್ಟೊಂದು ಸಲೀಸಾಗಿ ನಗುತಲಿದ್ದೆ. ಆದರು ನಿನ್ನ ಮತ್ತೆ ಬೇರೆ, ಎಲ್ಲ ಹುಡುಗಿಯರಿಗಿಂತ ನೀನೇನು ಸುಂದರಿ ಅಲ್ಲ, ಆದರು ಅದೇಕೋ ನಿನ್ನ ಪ್ರತಿ ಅರಿವಾಗುತಿದೆ ಬೇರೆ.
ನಾನು ಮದುವೆಯ ಸಲುವಾಗಿ ಹುಡುಗಿ ನೋಡುತಲಿದ್ದೆ, ಆದರೆ ನೀನು ಇನ್ನು £À¹ðUï ಪ್ರಥಮ ವರ್ಷದ ವಿದ್ಯಾರ್ಥಿನಿ DV¤AzÀ¯Éà £ÀªÀÄä C¥Àà ¤£ÀߣÀÄ £ÉÆÃrPÉÆAqÀÄ §A¢zÀÝgÀÄ, ಅದು ಹೇಗೆ ನಮ್ಮಿಬ್ಬರ ನಡುವೆ ಪ್ರೀತಿ ಅಷ್ಟೊಂದು ಗಾಢವಾಗಿ ಬೆಳೆಯಿತು ಇನ್ನು ಅರ್ಥವಾಗ್ತಾ ಇಲ್ಲ. ನಿನ್ನ ಮತ್ತು ನನ್ನ ಪ್ರೀತಿಯ ಮೊದಲ ಕೊಂಡಿ ಮಾಯಾಜಾಲ SMS ಮತ್ತು ಫೋನ್, ಕನಸಿನ ಜಗತ್ತಿ ನಿoದ  ನಮ್ಮ ಸ್ನೇಹ ವಾಸ್ತವದ ಜಗತ್ತಿಗೆ ಬಂದದ್ದು ಕ್ಷಣ ಕಲ ನಾನು ಕೂಡ ಸ್ಥಬ್ಧ, ಹೀಗೇಕೆ ಎಂದು ನಾನು ಕೇಳಿದಾಗ ನಿನ್ನ ಉತ್ತರ ಇಂದು ಕೂಡ ನನ್ನ ಕಿವಿಯಲ್ಲಿ ಸ್ಪಷ್ಟವಾಗಿ ಕೇಳುತ್ತೆ. ನೀವು ಕಲ್ಪಿಸಿಕೊಂಡಷ್ಟು ನಾನು ಚೆನ್ನಾಗಿಲ್ಲ ಅಲ್ವಾ ? ಹೌದು a£ÀÄß... ನಿಜ, ಆದರೆ ನಿನ್ನ ಮಾತು, ನಿನ್ನ ನಡೆ, ನಿನ್ನ ಮುಗ್ಧತೆ ಎಲ್ಲ ನಿನ್ನನು ಎಲ್ಲರಿಗಿಂತ ಸುಂದರಿಯಗಿಸಿದೆ, ನಾನು ಇನ್ನು ವಿಚಾರ ಮಾಡುತ್ತಲೇ ಇದ್ದೆ. ನಮ್ಮಿಬ್ಬರ ಪ್ರೀತಿ ತುಂಬಾ ಭಿನ್ನ ಎಂದು ನೀನು ಯಾವಾಗಲು ಹೇಳುತಿದ್ದೆ, ಹೌದು ಕಣೆ ಅದು ತುಂಬಾನೇ ಸತ್ಯ. ನಿನ್ನ ಪ್ರತಿ ಮಾತು ಮರೆಯುವದು ಎಷ್ಟೊಂದು ಕಷ್ಟ ಎಂದು ನನಗೆ ಇವಾಗ ಅರಿವಾಗುತ್ತಿದೆ, ನನ್ನನ್ನು ಕ್ಷಮಿಸು ಬಹುಶ ನಿನ್ನಲ್ಲಿ ಇರುವಷ್ಟು ವಿಲ್ ಪವರ್ ನನ್ನಲ್ಲಿ ಇರಲಿಲ್ಲ. ಇಂದಿಗೂ ನಿನ್ನ ಮಂಜಾದ ಕಣ್ಣುಗಳು ನೆನಪಾದಾಗ ನನ್ನ ಬದುಕಿನ ದೊಡ್ಡ ತಪ್ಪಿನ ಅರಿವಾಗುತ್ತದೆ. ಗೊತ್ತಿರದೇ ನನ್ನ ಕಣ್ಣುಗಳು ತೇವವಾಗುತ್ತವೆ a£ÀÄß...  ನಿನ್ನಿಂದ ದೂರವಾಗುವದು ನನಗು ಸುಲಭವಾಗಿರಲಿಲ್ಲ, ಪ್ರತಿ ದಿನ ಪ್ರತಿ ಕ್ಷಣ ನಿನ್ನನು ಮೋಸ ಮಾಡುತಿದ್ದೇನೋ ಎಂದು ನನ್ನ ಮನಸ್ಸು ನನಗೆ ತುಂಬಾ ನೋವು ನೀಡುತ್ತಿತ್ತು . ನನ್ನಾಣೆ ನಾನು ನಿನ್ನನ್ನು ನನ್ನವಲಾಗಿಸಿಕೊಳ್ಳಬೇಕು ಎಂದು ತುಂಬಾನೇ ಪ್ರಯತ್ನ ಪಟ್ಟೆ ಆದರು ಆದೇಕೋ ವರ್ಕ್ ಔಟ್ ಆಗಲಿಲ್ಲ. ಯಾರ ತಪ್ಪು ಆದೆಲ್ಲ ಇಂದು ನನಗೆ ಹೇಳುವ ಬಯಕೆ ಕೂಡ ಇಲ್ಲ. ಬದುಕು ಒಂದು ನಿರಂತರ ಪಯಣ, ಬದುಕಿನ ದಾರಿಯಲ್ಲಿ ನೋವು ನಲಿವು ಎಲ್ಲ ಇದ್ದುದ್ಡೇ, ಬದುಕಿನ ದಾರಿ ಪಯಣಿಸುವಾಗ ಬೇರೆ ಬೇರೆ ತರಹದ ಸನ್ನಿವೇಶಗಳು ಸಂಧರ್ಭಗಳೂ ನಮ್ಮ ಹೃದಯವನ್ನೂ ತಟ್ಟುತ್ತವೆ. ಮನುಷ್ಯ ಪ್ರತಿ ಗಳಿಗೇ ಬೇರೆ ಬೇರೆ ತರಹ ಬೇರೆ ಬೇರೆ ಸನ್ನಿವೇಶಗಳಿಗೇ ಸ್ಪಂದಿಸುತ್ತಾನೆ. ನನ್ನ ಬಗ್ಗೆ ನಾನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಲೇ ನನ್ನ ಬದುಕು ಸಾಗಿದೆ. ಕೆಲವೊಮ್ಮೆ ಆದರೂ ನಮಗೆ ಅರ್ಥವಾಗದ ಅನೇಕ ಸನ್ನಿವೇಶಗಳು ನಮ್ಮ ಬದುಕನ್ನು ನಿಯಂತ್ರಿಸುತ್ತವೆ. ನಗು-ಅಳು, ಸುಖ-ದುಖ ಇದೆಲ್ಲದಕ್ಕೂ ಮಿಗಿಲಾಗಿ ಒಮ್ಮೊಮ್ಮೆ ಮನಸು ಅದೇನು ಅರ್ಥವಾಗದ ಕಳವಳದಲ್ಲಿ ಮುಳುಗಿರುತ್ತೆ. ಒಡನಾಟ ಮರೆಯಲಸಾಧ್ಯ. ಸೀಮಿತ ದಿನಗಳ ಕಾಲದ ನಮ್ಮ ಒಡನಾಟವಾದರೂ ಮಹತ್ವಕಾಂಕ್ಷೆಗಳ ವಿಚಾರ, ಒಮ್ಮೊಮ್ಮೆ ಹಾಗೆ ಗಂಭೀರ, ಮತ್ತೊಮ್ಮೆ ಮುನಿಸು, ಒಂದಿಷ್ಟು ಕುಚೇಷ್ಟೇ, ಪ್ರೀತಿ, ವಿರಸದಲ್ಲಿ ಒಬ್ಬರಿಗೊಬ್ಬರ ಸಾಂತ್ವಾನ, ದುಃಖ ಮಿತಿ ಮೀರಿದರೆ ಕಣ್ಣಂಚಲ್ಲಿ ಕಣ್ಣೀರಿನ ಭೋರ್ಗರೆತ, ಇಪ್ಪತ್ತರ ಹರೆಯದರಲ್ಲಿ ಇದ್ದರೂ ನಿನ್ನ ಎಳೆ ಕಂದನ ಮನಸ್ಸು. ನನ್ನದೋ ಸಿಡುಕು ಮೂತಿ, ಸದಾ ವಟವಟ ಅನ್ನುತ್ತಲೇ ರೇಗಾಡುತ್ತೇನೆ. ಅದೇ ಮನಸ್ಥಿತಿಯಲ್ಲಿ ನನ್ನನ್ನೇ ದಿಟ್ಟಿಸಿ ನೋಡು. ನಿನ್ನ ಆ ನೋಟವೇ ನನ್ನನ್ನು ಕ್ಷಮಿಸಿ ಬಿಡೇ...ಪ್ಲೀಸ್.... ಎಂದು ಹೇಳುವ ಹಾಗೆ ಮಾಡಿಸುತ್ತಿತ್ತು.
ಗೊತ್ತು ಗುರಿಯಿಲ್ಲದ ಜೀವನದಲ್ಲಿ ಅಪರಿಚತ ಜನರೊಂದಿಗೆ ಸುಮಾರು 12 ತಿಂಗಳುಗಳ ಕಾಲದ ಒಡನಾಟ ನಮ್ಮದು. ಬಹುಶಃ ಜಾಸ್ತಿ ಮುಂದುವರಿಸಲು ದೇವರಿಗೂ ಇಷ್ಟವಿರಲಿಲ್ಲವೋ ಏನೋ, ನಿನ್ನ ಅಗಲಲೇ ಬೇಕಾಯ್ತು, ಜೊತೆಯಾಗಿಯೇ ಬಂದೆವು, ಆದರೆ ಈಗ ನನ್ನನ್ನು ಒಂಟಿಯನ್ನಾಗಿಸಿ ಹೋಗಿಯೇ ಬಿmÉÖ. ಸದ್ಯ ¤Ã£ÀÄ ಬೆಂಗಳೂರೆಂಬ ಐಟಿ ಸಿಟಿಯಲ್ಲಿ ಉದ್ಯೋಗದಲ್ಲಿದ್ದಾ. ಭೌತಿಕವಾಗಿ ¤Ã£ÀÄ ಈಗ ನನ್ನೊಂದಿಗೆ ಇರದೇ ಇರಬಹುದು. ಆದರೆ ಮಾನಸಿಕವಾಗಿ ¤Ã£ÀÄ ನನ್ನ ಹೃದಯದಲ್ಲಿ ಬೆಚ್ಚಗಿನ ನೆನಪುಗಳನ್ನು ಇರಿಸಿ ಅದರೊಂದಿಗೆ ಕಚಗುಳಿ ಇಡುತ್ತಿದ್ದಾಳೆ.
ಹಾ!!! ¤£ÉÆßA¢UÉ ಕಳೆದ ದಿನಗಳಲ್ಲಿ ಆ ಒಂದು ದಿನ ನಡೆದ ಘಟನೆ ನನಗಿನ್ನು ಸರಿ ನೆನಪಿದೆ, " ಪ್ಲೀಸ್ ಇವತ್ತು ಒಂದು ದಿನ ಆದ್ರೂ ಕೋಪ ಕಡಿಮೆ ಮಾಡ್ಕೋ, ಎಷ್ಟು ದಿನಾಂತ ಹೀಗೆ ರೇಗಾಡ್ತೀಯಾ ನಾನು ಇನ್ನು ನಿನ್ನ ಜೊತೆ ಇರೋದು ಕೇವಲ ಬೆರಳೆಣಿಕೆಯಷ್ಟು ದಿನ ಮಾತ್ರ ಕಣೇ, ಇವತ್ತಾದ್ರೂ ಖುಷಿ ಪಟ್ಕೊಂಡು ಇರ್ಬಾರ್ದಾ?"  ಸಮುದ್ರ ನೀರಿನ ಮುಂದೆ ನಿಂತು... ನಮ್ಮ ಜೀವನವೇ ಈ ಅಲೆಗಳ ಹಾಗೆ ಕಣೇ ಒಮ್ಮೊಮ್ಮೆ ಎಷ್ಟೇ ರಭಸದ ಅಲೆ ಬಂದರೂ ನಾವು ಧೃಢವಾಗಿ ನಿಂತು ಎದುರಿಸುತ್ತೇವೆ, ಆದರೆ ಇನ್ನೊಮ್ಮೊಮ್ಮೆ ಆ ರೀತಿಯಾಗಿ ಆಧಾರವಿಲ್ಲದೆ ಬೀಳುತ್ತೇವೆ ಎಂದು ಅಲೆಗಳ ರಭಸಕ್ಕೆ ಹಿಡಿತವಿಲ್ಲದೆ ಬಿದ್ದು ಏಳಲು ಪರದಾಡುತ್ತಿರುವವರು, ಯಾವಾತ್ತು ನಿನ್ನ ಖುಷಿ ಬಗ್ಗೆ ಯೋಚನೆ ಮಾಡದೆ ನಿನ್ನೊಂದಿಗೆ ಇರುವವರನ್ನು ಖುಷಿಯಾಗಿ ಇಡುವುದರ ಬಗ್ಗೆ ಯೋಚನೆ ಮಾಡು, ನಾನು ನಿನ್ನಲ್ಲಿ ಅಂದು ತುಂಬಾ ಕೆಟ್ಟದಾಗಿ ನಡೆದುಕೊಂಡೆ ನನ್ನನ್ನು ಕ್ಷಮಿಸಿ ಬಿಡು.
ಅಂದು ನೀ ಕೊಟ್ಟ ಭರವಸೆಗಳೇನದವು ಗೆಳತಿ ಮರೆತೆಯಾ ನೀ ಎಲ್ಲವನ್ನು ನಮ್ಮ ಸ್ನೇಹದಲ್ಲಿ ಮಾತ್ಸರ್ಯವಿಲ್ಲೆಯೆಂದಿದ್ದೆ ಇಂದೇನಾಗಿಹೋಯಿತು ಗೆಳತಿ.. ನಿನಗೆ ನಾ ಮಗುವು ನನಗೆ ನೀ ಮಗುವು ಇದು ನಿನಗೆ ತಿಳಿದಿಲ್ಲವೇ.. ಮಗುವಿನಾ ಮುನಿಸಿದು ಎಂದು ನಾ ತಿಳಿದಿದ್ದೆ ಆದರೇ ತಾಯಿಯೆ ಇಲ್ಲವೆನಗೆ ಎನ್ನುವುದು ನಿನಗೆ ತರವೇ? ನಮ್ಮದು ತಿಳಿಹಾಲಿನದ್ದು ಬಂಧನವೆಂದ ನಿನ್ನ ಅಷ್ಟೂ ಮಾತುಗಳು ಇಂದೇನಾದವು? ಹಾಲಿನಂತ ಸ್ನೇಹ ಒಡೆದಿದ್ದಾದರು ಎಲ್ಲಿ ನೆನಪು ಮಾಡು…. ನನ್ನ ಸ್ನೇಹವಿದು ನಿನಗೆ ಪಂಜರದ ಹಕ್ಕಿಯೆನಿಸಿದರೆ ಹಾರಿ ಬಿಡಲು ಹಕ್ಕಿಯನ್ನು ನಾನು ಸಿದ್ದ.. ಆದರೇ ಒಂದು ಮಾತು ಹಾರುವ ಮುನ್ನ ನೀ ತಿಳಿಸದೇ ಹೋಗದಿರು ನನ್ನ ಸ್ನೇಹ ನಿನಗೆ ಪಂಜರವಾದ ಕಾರಣವನ್ನ…….
ಇನ್ಯಾವತ್ತೂ ನಿನ್ನ ನೆನಪು ಮಾಡಿಕೊಳ್ಳಬಾರದೆಂದು ಅವುಡುಗಚ್ಚಿ ಕುಳಿತಿದ್ದೆ. ಮೊಬೈಲಿನ ಸಿಮ್ಮನ್ನ ಸುಮ್ಮನೆ ಕೈಗೆ ಸಿಗದಂತೆ ಎತ್ತಿಟ್ಟಿದ್ದೆ. ನೀನು ನೆನಪಾದ ಕೂಡಲೇ ಕಣ್ಣಂಚಲ್ಲಿ ಇಣುಕುವ ಒಂದಿಷ್ಟು ಹನಿಗಳನ್ನ ನನಗೇ ಕಾಣಿಸದಂತೆ ಬಚ್ಚಿಟ್ಟಿದ್ದೆ. ಪ್ರತಿ ದಿನ ಹಾದು ಹೋಗುವ ದಾರಿಯಲ್ಲೆಲ್ಲಾದರೂ ನಿನ್ನ ಮುಖ ದರ್ಶನವಾದೀತೆಂಬ ಭಯ(?)ದಿಂದ ನನಗಿಷ್ಟದ ಬಸ್ ರೂಟ್ ಬದಲಿಸಿದ್ದೆ. ಪ್ರತಿ ಕ್ಷಣ ನಿನ್ನ ನೆನಪು ಮಾಡಿಕೊಳ್ಳುವ ನನ್ನ ಅಸಹಾಯಕತೆಯನ್ನ ನಾನೆ ಮೂದಲಿಸಿದ್ದೆ. ನಿನ್ನಿಷ್ಟದ ಹಾಡನ್ನ ಮತ್ಯಾವತ್ತೂ ಗುನುಗಿಕೊಳ್ಳಲಿಲ್ಲ. ನೀನು ಕುಡಿಸಿದ ಟಿ ಷರಬತ್ತು, ಯಾವುದನ್ನೂ ªÀÄgÉÃAiÀįÁUÀÄwÛ®è UɼÀw...
ಕಾರಣವೇ ಇಲ್ಲದೇ ಇಷ್ಟವಾದವನು ನೀನು. ನಿನ್ನ ಪ್ರೀತಿಸಲು ಅಸಲು ನನಗೆ ಕಾರಣವೇ ಇರಲಿಲ್ಲ. ೧೯೯೭ ಮಾಡೆಲ್ ಹೀರೋ ಹೋಂಡ ಬೈಕಿನ ಕಪ್ಪು ಸುಂದರ?ನಿಗೆ ಫೆರಾರಿ ಕಾರಿನ ಚೆಲುವೆ ಒಲಿಯುವುದೆಂದರೆ ಸುಮ್ಮನೆ ಮಾತಾ? ಕಾಚರಕನಹಳ್ಳಿಯ ಸ್ಲಮ್ಮಿನ ಗುಡಿಸಿಲಿನ ಹೊಸ್ತಿಲೊಳಗೆ ಡಾಲರ್ಸ್ ಕಾಲೋನಿಯ ಕೋಟಿ ಬಂಗಲೆಯ ಹುಡುಗಿ ಕಾಲಿಡುವುದು ಅಂದರೆ ಸುಮ್ಮನೆ ಮಾತಾ? ಮುಂದೆ ಯಾವತ್ತಾದರೂ ಡಾಲರ್ಸ್ ಬೇಬಿಯ ನೆನಪು ಮಾಡಿಕೊಳ್ಳಬಹುದೆಂಬ ಸಣ್ಣ ನಂಬಿಕೆಯಲ್ಲಿ ಪ್ರೀತಿಸುತ್ತ ಮುಂದೆ ಹೋಗ್ತಿದ್ದೀನಿ. ಫೆರಾರಿ ಕಾರಿಲ್ಲದೆ ಒಂದಡಿಯೂ ಮುಂದಿಡದಿದ್ದ ಗುಲಾಬಿ ಕೆನ್ನೆಯ ಹುಡುಗಿ ಬರಿಗಾಲಲ್ಲಿ ಒಂದಿಷ್ಟು ಅಳುಕಿಲ್ಲದೆ ನನ್ನ ಜೊತೆಗೂಡಿ ನಡೆದಾಡಿದ್ದು ಐತಿಹಾಸಿಕ ಘಟನೆಯಾಗುವುದಿಲ್ಲವೆ  UɼÀw...?  ಬಣ್ಣ ಬದಲಿಸುವ ಹುಡುಗ ಹುಡುಗಿಯರ ಬಗ್ಗೆ ನನಗೆ ಹೆಚ್ಚು ತಿಳಿಯದು, ಆದರೆ ನಿಜವಾಗಿಯೂ ಪ್ರೀತಿಸುವ ಗೆಳೆಯ ಗೆಳತಿಯರ ಸಂಖ್ಯೆ ಯಾವತ್ತೂ ಮುಗಿಯದು. ನಿನ್ನ ಚಂಚಲ ಮನಸ್ಸು, ನಿನ್ನ ಹಸಿ ಹಸಿ ಸುಳ್ಳು, ಇವೆಲ್ಲವನ್ನೂ ಬದಿಗಿಟ್ಟು ಹೇಳಬೇಕೆಂದರೆ ಇನ್ನೂ ಕೂಡ ಇಷ್ಟೇ ಇಷ್ಟು ಪ್ರೀತಿ ನಿನ್ನೆಡೆಗುಳಿದಿದೆ. ಮುಂದೆ ಅದು ಹೆಮ್ಮರವಾದರೂ ಆಗಬಹುದು. ಸ್ವಾಭಿಮಾನಕ್ಕೆಲ್ಲ ತಿಲಾಂಜಲಿ ಬಿಟ್ಟು ನನಗೆ ನೀನು ಬೇಕೂ ಅಂತಾನೆ ಕೊನೆಯ ಸಲ ಕೇಳ್ತ ಇದ್ದೀನಿ, ಮೆಸ್ಸೇಜ್ ಮಾಡು ಪ್ಲೀಸ್.
ನಿನ್ನ ಮಾತು ಚಿಕ್ಕದಾದರು ನನ್ನ ಮನಸನ್ನದು ಈಗಲೂ ಕೊರೆಯುತ್ತಿದೆ. ಬಹುಷಃ ನೆನಪುಗಳೇ ಹೀಗೆ ಎಂದು ಅನಿಸುತ್ತದೆ. ¤Ã£ÀÄ ಎಲ್ಲೇ ಇರಲಿ ಹೇಗೆ ಇರಲಿ ಮನದಲ್ಲಿ ಸದಾ ಹರುಷವನ್ನೇ ತುಂಬುತ್ತಿರಲಿ ಎಂದು ಬಯಸುವೆ.
ಹೌದು ಜೀವನ ಅನ್ನೂದು ಎರಡು ಕಂಬಿಗಳ ಮೇಲೆ ಚಲಿಸೋ ರೈಲಿನತರಹ, ನಮ್ಮ ನಮ್ಮ ನಿಲ್ದಾಣ ಬರುವ ತನಕ ನಾವು ಕಾಯ್ಲೆ ಬೇಕು ಅಷ್ಟರೊಳಗೆ ನಮಗೆ ಎಷ್ಟೊಂದು ಅನುಭವಗಳಾಗಿರುತ್ತವೆ ಆಲ್ವಾ ! ಪಯಣದಲ್ಲಿ ಎಷ್ಟೋ ತಿರುವುಗಳು ಸಿಗ್ತವೆ, ಎಷ್ಟೋ ಜನ ಬಂದು ಇಳಿದು ಕಣ್ಮರೆಯಾಗಿ ಹೋಗ್ತಾರೆ ಅವೆಲ್ಲ ಒಂದು ಸಣ್ಣ ನೆನಪು ಅನ್ನಬಹುದು ಆದ್ರೆ ರೈಲು ಬಂಡಿಯಾ ಪಯಣದಲ್ಲಿ ಪರಿಚಯವಾಗಿ ಮನಸ್ಸಿನಲ್ಲಿ ಶಾಶ್ವತ ವಾಗಿ ಉಳಿದು ಕೊನೆಗೆ ಒಂದು ದಿನ ಬಿಳಿ ಹಾಳೆ ಮೇಲೆ ಅವರ ನೆನಪುಗಳನ್ನ ನನ್ನ ಕೈ ಗಳಿಂದ ದಾಖಲಿಸುವಂತೆ ಮಾಡ್ತಾರಲ್ಲ ಅಂತಹ ಒಬ್ಬ ಗೆಳತಿನ ನಾ ಹೇಗೆ ಮರೆಯಲಿ, No, Never ಸಾಧ್ಯವಿಲ್ಲದ ಮಾತು. ನಿನ್ನ ಮರೆಯೋದಕ್ಕೆ ಆಗೋಲ್ಲ ಏಕೆಂದರೆ ನೀನು ನನ್ನ ನೆನಪಿನ ಮಡಿಲಲ್ಲಿ ನೆನಪಾಗಿ ಉಳಿದಿಯ.
ಹೇಳಿಕೊಳ್ಳೋ ಅಂತ ದುಃಖ ಏನು ಇಲ್ಲ, ಮಧುವೆ............... ಮಧುವೆ............. ಇದೆ  ಒಂದು ದೊಡ್ಡ ಸಮಸ್ಯೆ ಆಗಿದೆ ರೀ, ನಮ್ಮ ಭಾವನೆಗಳಿಗೆ ಇಲ್ಲಿ ಬೆಲೆ ಇಲ್ಲ, ಅದಕ್ಕೆ ಹೇಳಿದ್ದು ಹುಟ್ಟಿದ್ದರೆ ಮದ್ಯಮ ವರ್ಗದಲ್ಲಿ ಹುಟ್ಟುಬಾರ್ದು, ಇದು ನೆನ್ನೆ ಮೊನ್ನೆಯ ಸಮಸ್ಯೆ ಅಲ್ಲ ಯಾವಾಗ ಭೂಮಿ ಮೇಲೆ ಕಾಲಿಟ್ಲೋ ಅಂದಿನಿಂದ ಇಂದಿನಹೊರೆಗೂ ಸಮಸ್ಯೆ ಅನ್ನೋ ಸಮಸ್ಯೆಗಳನ್ನ ಕೊನೆಗಾಣಿಸೋಕೆ ಬ್ರಮ್ಹನಿಂದಲೂ ಆಗೋಲ್ಲ ಅನಿಸುತ್ತೆ ಅಲ್ವ ! ಅದೇನೋ ಗಾದೆ ಇದೆಯಲ್ಲ "ಪಾಪಿ ಸಮುದ್ರಕ್ಕೊದ್ರು ಮೊಳಕಾಲ್ಮಠ ನೀರು" ಅಂದಂಗೆ  ನಗುವ ಮೊಗದ  ಹೊವಲ್ಲಿ  ಮಾತು ಮಾತಿಗೂ ಯಾಕಿಷ್ಟು ಅಸಮದಾನ ! ಕೇಳು ಗೆಳತಿ ಹೇಳಬೇಕೆ  ನಾನು ಏನಾದರು ಸಮಾದಾನ ! ಜೀವನ ಒಂದು ತೊಗುಯ್ಯಲೇ  ಮರೆಯಬೇಡಮ್ಮ,  - ತಾಳ್ಮೆ ಬೇಕಮ್ಮ !
ಅದೇನೋ ಗೊತ್ತಿಲ್ಲ ಕಣ್ರೀ ನಿಮ್ಮ ನೋಡಿದ ತಕ್ಷಣ ನನ್ನ ಎಲ್ಲ ನೋವಗಳನ್ನ ನಿಮ್ಮ ಜೊತೆ ಶೇರ್ ಮಾಡ್ಕೊಬೇಕು ಅನಿಸಿತ್ತು ಅದಕ್ಕೆ ಎಲ್ಲ ನಿಮ್ಗೆ ಹೇಳ್ತಾ ಇದೀನಿ ಥರನಾದ್ರು ನಾನು ನನ್ನ ಭಾವನಗಳನ್ನ ನಿಮ್ಮ ಜೊತೆ ಹಂಚಿಕೊಂಡು ನನ್ನ ದುಃಖನ ಕಡಿಮೆ ಮಾಡಿಕೊಳ್ತಾ ಇದೀನಿ ಏನು ತಪ್ಪು ತಿಳ್ಕೊಬೇಡಿ. "ನಿನ್ನಂತ ಒಳ್ಳೆ ಹುಡುಗಿ ನನಗೆ ಸಿಗ್ತನೋ ಇಲ್ವೋ ! ನಿನಗೆ ಮಾತ್ರ ಒಳ್ಳೆ ಹುಡುಗ ಸಿಗ್ಲಿ ನಿಮ್ಮನ್ನ ನೋಡೋ ಋಣ ಇತ್ತು ಅಂದ್ರೆ ಮತ್ತೆ ನಾವಿಬ್ರು ಸಿಕ್ಕೆ ಸಿಗ್ತಿವಿ " ನಿಮ್ಮ ಜೊತೆ ಕಳೆದ ಕೆಲವು ಕ್ಷಣಗಳು ನನ್ನ ಜೀವನ ಇರೋತನಕ ಮರೆಯೋಲ್ಲ. "ನೀವು ಎಲ್ಲೇ ಇದ್ರೂ ಚನ್ನಗಿರಿ ನಿಮ್ಮ ಮುಂದಿನ ಜೀವನ ಇನ್ನು ಚನ್ನಗಿರುತ್ತೆ " ದೇವರು ನಿಮ್ಮನ್ನ ಕಾಪಾಡ್ತಾನೆ.  ನಿನ್ನ ನೋಡೋ ಋಣ ಬರುತ್ತಾ .................... ? ? ? ಬಂದೆ ಬರುತ್ತೆ ಅಂತ ಹೇಳ್ತಾ ಇದೇ ನನ್ನ ಮನಸ್ಸೂ, ಒಂದಲ್ಲ ಒಂದು ದಿನ ಋಣ ಕೊಡಿ ಬಂದ್ರೆ " ನಿನ್ನ ಗಂಡನ ಜೊತೆ ನನ್ನ ಮುದ್ದು ಗೆಳತಿ ಕೈಯಲ್ಲೊಂದು ಮಗು" ನೋಡೇ ನೋಡ್ತೀನಿ…!
ನೆನಪಿನ ಅಂಗಳದಿ ನೆನಪಿನ ರಂಗೋಲಿ ಇಟ್ಟು ನೆನಪಿನ ಬಣ್ಣ ತುಂಬುವ ಮುನ್ನ  ನೆನಪಲ್ಲೇ ನೆನಪಾಗಿ ಹೋದ
"ನನ್ನ ಮುದ್ದು ಗೆಳತಿ ಭಾವನೆಗಳ ಒಡತಿ" ಎಲ್ಲೇ ಇರು ಹೇಗೆ ಇರು ಚನ್ನಾಗಿರು  ಇಂತಿ ನಿನ್ನ ಕೆಲವೇ ಕೆಲವು ದಿನಗಳ ಗೆಳೆಯ ನಿನ್ನ ಸ್ನೇಹದ ಸೇವಕ

No comments:

Post a Comment