Thursday 31 March 2011

36 ವರ್ಷಗಳಿಂದ ಜೀವಚ್ಛವವಾಗಿರುವ ಮಹಿಳೆಯ ದಾರುಣ ಕಥೆ

36 ವರ್ಷಗಳಿಂದ ಜೀವಚ್ಛವವಾಗಿರುವ ಮಹಿಳೆಯ ದಾರುಣ ಕಥೆ 
ಕಳೆದ 37 ವರ್ಷಗಳಿಂದ ಮುಂಬೈಯ ಕೆಇಎಂ ಆಸ್ಪತ್ರೆಯ ಕೋಣೆಯೊಂದರಲ್ಲಿ ಜೀವಚ್ಛವವಾಗಿ ಮಲಗಿರುವ ಅರುಣಾ ರಾಮಚಂದ್ರ ಶಾನಭಾಗ್ ಬಗ್ಗೆ ಅವರ ಸಹೋದರಿ ಶಾಂತಾ ನಾಯಕ್ ಹೇಳಿರುವ ಮಾತಿದು. ತೀರಾ ಗದ್ಗದಿತರಾಗಿಯೇ ಮಾತು ಆರಂಭಿಸಿದ ಅವರು, ಈ ಸ್ಥಿತಿಯಲ್ಲಿ ಆಕೆಯನ್ನು ಮತ್ತೆ ನೋಡಲಾರೆ ಎಂದು ದಯಾಮರಣ ನಿರಾಕರಿಸಿದ ನಂತರ ಪ್ರತಿಕ್ರಿಯಿಸಿದ್ದಾರೆ. ಆಕೆಯನ್ನು ನಾನು ಮತ್ತೆ ನೋಡಲಾರೆ. ಕೆಇಎಂ ಆಸ್ಪತ್ರೆಯ ದಾದಿಯರು ಅರುಣಾಳನ್ನು ನೋಡಿಕೊಳ್ಳುತ್ತಾರೆ. ಅಲ್ಲಿಗೆ ಹೋಗುವ ವಯಸ್ಸೂ ನನ್ನದಲ್ಲ ಎಂದು ಮುಂಬೈಯ ಲೋವರ್ ಪರೇಲ್ ನಿವಾಸಿ 75 ದಾಟಿರುವ ಶಾಂತಾ ನಾಯಕ್ ತ್ರಾಸದಿಂದಲೇ ಹಜಾರದಲ್ಲಿ ಅಡ್ಡಾಡುತ್ತಾ ಮಾತಿಗಿಳಿದರು.
ನಾನು ಆಕೆಯನ್ನು ಕೊನೆಯ ಬಾರಿ ನೋಡಿದ್ದು, ಟಿವಿಯಲ್ಲಿ, ಕೆಲವು ತಿಂಗಳ ಹಿಂದೆ. ನನ್ನ ಕಣ್ಣಲ್ಲಿ ನೀರು ಬಂದದ್ದನ್ನು ನೋಡಿ ಅಳಿಯ ತಕ್ಷಣವೇ ಟಿವಿ ಆಫ್ ಮಾಡಿದ. ಈ ಸ್ಥಿತಿಯಲ್ಲಿ ಆಕೆಯನ್ನು ನೋಡುವುದು ತೀರಾ ಹಿಂಸೆಯೆನಿಸುತ್ತದೆ' ಎಂದು ಭಾವುಕರಾಗಿ ನುಡಿದರು. ಅತ್ಯಾಚಾರಕ್ಕೊಳಗಾಗಿ ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅರುಣಾ ಶಾನಭಾಗ (60) ಅವರಿಗೆ ದಯಾಮರಣ ಕರುಣಿಸಬೇಕು ಎಂದು ಪತ್ರಕರ್ತೆ ಪಿಂಕಿ ವಿನಾನಿ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದನ್ನು ಕೋರ್ಟ್ ಕೆಲ ದಿನಗಳ ಹಿಂದಷ್ಟೇ ತಿರಸ್ಕರಿಸಿತ್ತು. ಅರುಣಾರಿಗೆ ದಯಾಮರಣ ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.
ಈ ಬಗ್ಗೆ ರಾಷ್ಟ್ರವ್ಯಾಪಿ ಭಾರೀ ಚರ್ಚೆಗಳು ನಡೆದಿದ್ದವು. ಆದರೆ ಇವ್ಯಾವುದರ ಗೊಡವೆಯೂ ಶಾಂತಾ ನಾಯಕ್ ಅವರಿಗಿಲ್ಲ. 'ಅರುಣಾ ಕುರಿತ ಸುದ್ದಿ ಅಥವಾ ಚರ್ಚೆಗಳನ್ನು ನಾನು ವೀಕ್ಷಿಸಿಲ್ಲ. ಆದರೆ ಅದರ ಬಗ್ಗೆ ನನಗೆ ಗೊತ್ತು' ಎನ್ನುವ ಅವರ ಪ್ರಕಾರ, ಅರುಣಾಗೆ ದಯಾಮರಣ ಕರುಣಿಸಬೇಕಾಗಿಲ್ಲ.
ಅರುಣಾ ಮತ್ತು ಶಾಂತಾ ಅವರದ್ದು ವಯಸ್ಸಿನಲ್ಲಿ 15 ವರ್ಷಗಳ ಅಂತರ. 'ನಾನು ಮದುವೆಯಾಗಿ ಹಳದೀಪುರದಿಂದ ಮುಂಬೈಗೆ ಸ್ಥಳಾಂತರಗೊಂಡಾಗ ಆಕೆಗೆ ಕೇವಲ ಒಂದು ವರ್ಷ. ಆಕೆ ನರ್ಸಿಂಗ್ ಕಲಿಯಲು ಮುಂಬೈಗೆ ಬಂದಾಗ ಹಾಸ್ಟೆಲ್ ಒಂದರಲ್ಲಿ ತಂಗಿದ್ದಳು. ಆಗಾಗ ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದಳು' ಎಂದು ಶಾಂತಾ ಈಗ ನೆನಪಿಸಿಕೊಳ್ಳುತ್ತಾರೆ.
ಕ್ಲಿನಿಕ್ ಒಂದನ್ನು ತೆರೆಯುವ ಸಲುವಾಗಿ ಹಣ ಹೊಂದಿಸುತ್ತಿದ್ದ ಅರುಣಾ ಶಾನಭಾಗ ಅವರು ಕೆಇಎಂ ಆಸ್ಪತ್ರೆಯ ವೈದ್ಯರೊಬ್ಬರನ್ನು ಮದುವೆಯಾಗುವ ತಿಂಗಳ ಮೊದಲು ತನ್ನ ಸಹೋದರಿ ಶಾಂತಾ ಜತೆಗೆ ನೆಲೆಸಿದ್ದರು. ಆದರೂ ಕೆಇಎಂ ಆಸ್ಪತ್ರೆ ಅಥವಾ ನಿಮ್ಮ ಸಹೋದರಿ ಜತೆ ನೀವು ಯಾಕೆ ಸಂಪರ್ಕ ಇಟ್ಟುಕೊಂಡಿಲ್ಲ ಎಂದು ಪ್ರಶ್ನಿಸಿದರೆ, 'ಅರುಣಾರನ್ನು ಮನೆಗೆ ಕರೆದುಕೊಂಡು ಹೋಗುವಂತೆ ಆಸ್ಪತ್ರೆಯವರು ನನಗೆ ಹೇಳಿದರು. ಆದರೆ ಹಾಗೆ ಮಾಡಲು ನಾನು ಆರ್ಥಿಕವಾಗಿ ಶಕ್ತಳಾಗಿರಲಿಲ್ಲ. ನಾಲ್ಕು ಮಕ್ಕಳು ಮತ್ತು ಅನಾರೋಗ್ಯ ಪೀಡಿತ ಗಂಡ ಜತೆಗಿದ್ದರು' ಎಂದು ತನ್ನ ಕಷ್ಟವನ್ನು ವಿವರಿಸಿದರು.
ಸ್ಫುರದ್ರೂಪಿಯಾಗಿದ್ದ ಅರುಣಾ ಶಾನಭಾಗರು ಒಂದು ದಿನ ಆಸ್ಪತ್ರೆಯ ವಿಶ್ರಾಂತಿ ಕೊಠಡಿಯಲ್ಲಿ ಬಟ್ಟೆ ಬದಲಾಯಿಸುತ್ತಿದ್ದಾಗ ದುರುಳ ವಾರ್ಡ್ ಬಾಯ್ ಅತ್ಯಾಚಾರ ಎಸಗಿದ್ದ. ಪ್ರತಿರೋಧ ತೋರಿದಾಗ ನಾಯಿ ಕಟ್ಟುವ ಚೈನಿನಿಂದ ಕತ್ತು ಬಿಗಿದಿದ್ದ. ಇದರಿಂದ ಮೆದುಳಿಗೆ ರಕ್ತ ಸಂಪರ್ಕ ಕಡಿತಗೊಂಡಿತ್ತು. ಪರಿಣಾಮ ಅರುಣಾ ಪ್ರಜ್ಞೆ ಕಳೆದುಕೊಂಡಿದ್ದರು.
ಯೌವನದಲ್ಲಿ ಅರುಣಾ ಸುಂದರಿಯಾಗಿದ್ದರು ಎಂಬುದನ್ನು ಒಪ್ಪಿಕೊಂಡಿರುವ ಶಾಂತಾ, ನನ್ನ ಎಲ್ಲಾ ಸಹೋದರಿಯರು ಮತ್ತು ಸಹೋದರರು ಪ್ರಕೃತಿದತ್ತ ಚೆಲುವನ್ನು ಹೊಂದಿದ್ದರು. ಇದರಿಂದ ಅರುಣಾ ಹೊರತಲ್ಲ. ಆದರೆ ಹಣೆಬರಹ ಎಲ್ಲವನ್ನೂ ಬದಲಾಯಿಸುತ್ತದೆ. ನಮ್ಮಲ್ಲಿ ಆಗ ಹಣವೇ ಇರಲಿಲ್ಲ. ಅರುಣಾಗೆ ಹೊಟ್ಟೆಗೆ ಇಲ್ಲದಾಗ ನನಗೂ ತಿನ್ನಲೇನೂ ಇರಲಿಲ್ಲ ಎಂದು ದಾಟಿ ಬಂದ ಬದುಕನ್ನು ಮೆಲುಕು ಹಾಕಿದರು.
ಘೋರ ಅಪರಾಧಿಗೆ ನೀಡುವ ಶಿಕ್ಷೆ­ಗಿಂತಲೂ ಮಿಗಿಲಾದ ಕಠಿಣ ಸನ್ನಿವೇಶಕ್ಕೆ ಈಡಾದ ಮಹಿಳೆಯ ಕರುಣಾಜನಕ ಕಥೆ ಇದು
ನವದೆಹಲಿ: ನಿಶ್ಚಿತಾರ್ಥ ಮಾಡಿಕೊಂಡಿದ್ದವಳು ಅತ್ಯಾಚಾರಕ್ಕೊಳಗಾಗಿ, 36 ವರ್ಷಗಳಿಂದ ಕೋಮಾದಲ್ಲಿದ್ದು ಆಸ್ಪತ್ರೆಯ ಹಾಸಿಗೆಯ ಮೇಲೆ ನಿರ್ಜೀವ ವಸ್ತುವಿನಂತೆ ಜೀವಿಸುತ್ತಿದ್ದಾಳೆ.
ನತದೃಷ್ಟೆಯ ಹೆಸರು ಅರುಣಾ ಶಾನಭಾಗ್. ಮುಂಬೈನಕಿಂಗ್ ಎಡ್ವರ್ಡ್ ಮೆಮೊರಿಯಲ್ (ಕೆಇಎಂ)’ ಆಸ್ಪತ್ರೆಯಲ್ಲಿ ದಾದಿಯಾಗಿ ಕೆಲಸ ಮಾಡು­ತ್ತಿ­ದ್ದವಳು. ಅರುಣಾ ಶಾನಭಾಗ್ ಅವರ ಕರುಣಾಜನಕ ಕಥೆಯನ್ನು ಪತ್ರಕರ್ತೆಯಾಗಿದ್ದ ಪಿಂಕಿ ವಿರಾನಿ ಮೊದಲು ವರದಿ ಮಾಡಿದರು. ವಿರಾನಿ  ಆನಂತರಅರುಣಾಳ ಕಥೆಎನ್ನುವ ಇಂಗ್ಲಿಷ್ ಕೃತಿಯೊಂದು ಹೊರ ತಂದರು.
ಪ್ರಸ್ತುತ, ಅರಣಾ ಅವರಿಗೆ ದಯಾಮರಣ ನೀಡ­ಬೇಕೆಂದು ಪಿಂಕಿ ವಿರಾನಿ ಅವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ದಯಾಮರಣ ನೀಡದಿದ್ದರೆ; ಅರುಣಾಳಿಗೆ ಆಹಾರ ನೀಡುವುದ­ನ್ನಾದರೂ ಸ್ಥಗಿತಗೊಳಿಸಲು ವಿರಾನಿ ಮನವಿ ಮಾಡಿಕೊಂಡಿದ್ದಾರೆವಿರಾನಿ ಪರವಾದ ಮಹಿಳಾ ವಕೀಲರು, ‘ದಯಾ­ಮರಣಕ್ಕೆ ಭಾರತದ ಕಾನೂನು ಅವಕಾಶ ಮಾಡಿಲ್ಲ. ಯಾರನ್ನಾದರೂ ಸಾಯಿಸಿದರೆ ಕಾನೂನಿನ ಪ್ರಕಾರ ಅದು ಅಪರಾಧವಾಗುತ್ತದೆ. ಆದರೆ, ಅರುಣಾ 36 ವರ್ಷಗಳಿಂದ ಯಾತನೆ ಅನುಭವಿ­ಸುತ್ತಿರುವುದರಿಂದ ಒಂದು ದಿನಕ್ಕಾದರೂ ಆಹಾರ ನೀಡುವುದನ್ನು ನಿಲ್ಲಿಸಬೇಕುಎಂದು ಹೇಳಿದ್ದಾರೆ.
ನೋವು, ಯಾತನೆ ಇಲ್ಲದೆ ಸಾವನ್ನಪ್ಪುವುದು ಕೂಡಾ ಮಾನವನ ಮೂಲಭೂತ ಹಕ್ಕು. ಆದರೆ, ಘಟನೆ ನಡೆದ ಕ್ಷಣದಿಂದ ಅರುಣಾಗೆ ಮಾತನಾಡಲು ಬರುವುದಿಲ್ಲ ಹಾಗೂ ಚಲಿಸಲು ಆಗದೆ ಯಾತನೆ ಪಡುತ್ತಿದ್ದಾಳೆ ಎಂದು ಅವರು ಹೇಳಿದ್ದಾರೆ. ಸರ್ಕಾರಕ್ಕೆ ನೋಟಿಸ್: ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರನ್ನೊಳಗೊಂಡ ಪೀಠವು ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಮಾಡಿದ್ದು, ದಯಾಮರಣ ಕೋರಿರುವ ಅರ್ಜಿಗೆ ಪ್ರತಿಕ್ರಿಯೆ ನೀಡಲು ಸೂಚಿಸಿದೆ.
ದಯಾ ಮರಣಮತ್ತೆ ತನ್ನ ಗೋರಿಯಿಂದ ಎದ್ದು ಕುಳಿತಿದೆ. 37 ವರ್ಷಗಳಿಂದ ಆಸ್ಪತ್ರೆಯ ವಾರ್ಡೊಂದರಲ್ಲಿ ಮರಣವನ್ನು ಎದುರು ನೋಡುತ್ತಿರುವ ಅರುಣಾಗೆ ಮರಣವನ್ನುದಯಪಾಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸುವ ಮೂಲಕದಯಾ ಮರಣಕುರಿತ ಪರ-ವಿರೋಧ ಚರ್ಚೆ ಕಾವು ಪಡೆದಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮವಾಗಿ ನಮ್ಮ ಮಾಧ್ಯಮಗಳು ತಮ್ಮ ಪುಟಗಳನ್ನು ಕೆಲ ದಿನ ದಯಾ ಮರಣದ ಚರ್ಚೆಗೆಂದೇ ಮೀಸಲಿಡುವ ಸಾಧ್ಯತೆಯಿದೆ. ಆದರೆ ಒಂದನ್ನು ಗಮನಿಸಬೇಕಾಗಿದೆ. ಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆಯೇ ಆಕೆಯ ಆರೈಕೆ ಮಾಡುತ್ತಿದ್ದ ದಾದಿಗಳು, ಕ್ರಿಶ್ಚಿಯನ್ ಸನ್ಯಾಸಿನಿಯರು ಪರಸ್ಪರ ಸಿಹಿ ಹಂಚಿಕೊಂಡಿದ್ದಾರೆ. ಅರುಣಾಳನ್ನು ಕಳೆದ 30 ವರ್ಷಗಳಿಂದ ಜೋಪಾನ ಮಾಡುತ್ತಿದ್ದ ದಾದಿಯರು ದಣಿದಿಲ್ಲ. ಮಾನವೀಯತೆ ಯೇ ಅರುಣಾರ ಬದುಕನ್ನು ಎತ್ತಿ ಹಿಡಿದಿದೆ.
ಜಗತ್ತಿನಲ್ಲಿ ಬದುಕು ಇನ್ನೂ ಯಾಕೆ ಆಶಾದಾಯಕವಾಗಿದೆಯೆಂದರೆ, ಇಲ್ಲಿ ಅರುಣಾರನ್ನು ತಾವು ನೋಡಿಕೊಳ್ಳಬಲ್ಲೆವು ಎಂದು ಹೃದಯಪೂರ್ವಕವಾಗಿ ಘೋಷಿಸುವ ಕೆಲ ಜೀವಗಳು ಇನ್ನೂ ಇವೆ. ಎಲ್ಲಿಯವರೆಗೆ ಇಂತಹ ಜೀವಗಳು ನಮ್ಮ ಸಮಾಜದಲ್ಲಿ ಜೀವಂತವಿರುತ್ತಯೋ ಅಲ್ಲಿಯವರೆಗೂ ದಯಾಮರಣವೆನ್ನುವುದು ತೀರಾ ಅಪ್ರಸ್ತುತ ಮತ್ತು ಅಮಾನವೀಯವಾಗಿಯೇ ಇರುತ್ತದೆ.
ದಯಾಮರಣವೆನ್ನುವ ಶಬ್ದವೇ ಬಹಳ ಸೂಕ್ಷ್ಮವಾದುದು. ಇದರ ಪರ ಕಾಯ್ದೆ ರಚಿಸುವುದೆಂದರೆ ತಂತಿಯ ಮೇಲೆ ನಡೆದಂತೆ. ಒಂದಿಂಚು ಆಚೀಚೆಯಾದರೂ ದಯಾಮರಣ ಗಳ ಸ್ವರೂಪ ಬದಲಾಗಿ ಬಿಡುತ್ತದೆ. ಆತ್ಮಹತ್ಯೆ, ಕೊಲೆ ಮತ್ತು ದಯಾಮರಣದ ನಡುವಿನ ಪರದೆ ತೀರಾ ತೀರಾ ತೆಳುವಾದುದು. ಅನೇಕ ಸಂದರ್ಭಗಳಲ್ಲಿ ದಯಾಮರಣ ಎನ್ನುವ ಸುಂದರ ಶಬ್ದದ ಮೂಲಕ ನಾವು ಆತ್ಮಹತ್ಯೆ ಮತ್ತು ಕೊಲೆಯನ್ನು ಅಲಂಕರಿಸಿದ್ದೇವೆಯೋ ಅನ್ನಿಸುವಷ್ಟು. ಇಂದು ಜಗತ್ತಿನಲ್ಲಿ ಸಾವನ್ನು ಬೇಡುತ್ತಿರುವುದು ಅರುಣಾ ಮಾತ್ರವಲ್ಲ. ಅರುಣಾರಂತಹ ಸಾವಿರಾರು ದುರ್ದೈವಿಗಳು ಮರಣವನ್ನು ಎದುರು ನೋಡುತ್ತಿದ್ದಾರೆ. ‘ಆತ್ಮಹತ್ಯೆಅಪರಾಧ ಎನ್ನುವ ಕಾರಣಕ್ಕಾಗಿ ಸರಕಾರಿಕಾಯ್ದೆ ಮೂಲಕ ಆತ್ಮಹತ್ಯೆಗೆ ಇವರು ಮುಂದಾಗಿದ್ದಾರೆ. ಸಾಧಾರಣವಾಗಿ ಸರಕಾರಿ ಕಾಯ್ದೆಗಳು ನೈತಿಕ ಮಾನದಂಡವನ್ನು ಅವಲಂಬಿಸಿರುತ್ತವೆ ಎನ್ನು ವಂತಿಲ್ಲ. ಹಾಗೆಯೇ ಕೆಲವೊಮ್ಮೆ ನಮಗೆ ನೈತಿಕವಾಗಿ ತಪ್ಪು ಎನ್ನಿಸುವಂತಹದನ್ನು ಕಾಯ್ದೆಗಳು ಸರಿ ಎನ್ನುತ್ತವೆ. ಆತ್ಮಹತ್ಯೆ ನೈತಿಕವಾಗಿ ತಪ್ಪೋ ಸರಿಯೋ ಎನ್ನುವುದು ನಮ್ಮ ಮುಂದಿರುವ ಮುಖ್ಯ ಪ್ರಶ್ನೆ. ಒಂದು ವೇಳೆ ಅದು ನೈತಿಕವಾಗಿ ತಪ್ಪು ಎಂದಾದರೆ ಕಾಯ್ದೆ ಒಪ್ಪಿದರೂ ಅದು ತಪ್ಪೇ ಆಗಿರುತ್ತದೆ. ಕಾರಣಕ್ಕಾಗಿ ನಾವುಕಾನೂನು ಬದ್ಧ ಆತ್ಮಹತ್ಯೆಅಥವಾಕಾನೂನು ಬದ್ಧವಾದ ಕೊಲೆಅಥವಾದಯಾಮರಣವನ್ನು ವಿರೋಧಿಸಬೇಕಾಗುತ್ತದೆ.
ಕ್ಯಾನ್ಸರ್ ಬಾಧಿತನಾಗಿರುವ ಒಬ್ಬ ನೋವಿನಿಂದ ವಿಲವಿಲಗುಟ್ಟುತ್ತಿರುತ್ತಾನೆ. ನೋವು ನಿರೋ ಧಕ ಮದ್ದುಗಳನ್ನು ಕೊಳ್ಳಲು ಆತನ ಬಳಿ ಹಣವಿರುವುದಿಲ್ಲ. ಅದಕ್ಕಾಗಿ ತನಗೆದಯಾಮರಣವನ್ನು ಕೊಡಿ ಎಂದು ನ್ಯಾಯಾಲಯದ ಮುಂದೆ ಮನವಿ ಮಾಡುತ್ತಾನೆ. ನ್ಯಾಯಾಲಯದ ಕೆಲಸವೇನು? ಆತನನ್ನುದಯೆ ಹೆಸರಿನಲ್ಲಿ ಕೊಂದು ಹಾಕುವುದೋ ಅಥವಾ ಆತನಿಗೆ ಬೇಕಾದ ಔಷಧಿಯನ್ನು ಒದಗಿಸಿಕೊಡುವುದೋ? ಮರಣವನ್ನುಉಡುಗೊರೆಯೆಂದು ಕೊಡುವ ಕಾನೂನನ್ನು ನಾವು ಯಾವ ಕಾರಣಕ್ಕೂ ಮಾನವೀಯ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಿಜಕ್ಕೂ ರೋಗಿಯ ಮೇಲೆ ದಯೆಯನ್ನು ತೋರಿಸುವ ಇಚ್ಛೆಯಿದ್ದರೆ ಆತನಿಗೆ ಆರ್ಥಿಕವಾಗಿ ನೆರವಾಗಬೇಕು. ಅತ್ಯಾಧುನಿಕ ಔಷಧಿಗಳನ್ನು ನೀಡಬೇಕು. ಸಾವು ಬರುವವರೆಗೂ ಅವನ ಬದುಕನ್ನು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಸಹನೀಯವಾಗಿಸಬೇಕು. ಇದು ನ್ಯಾಯಾಲಯದ ಕರ್ತವ್ಯ ಮಾತ್ರವಲ್ಲ, ಸಮಾಜದ ಕರ್ತವ್ಯವೂ ಕೂಡ.
ಒಂದು ವೇಳೆ ಅರುಣಾ ಪರ ಮನವಿಯನ್ನು ಒಪ್ಪಿಕೊಂಡು ಆಕೆಗೆ ಮರಣವನ್ನು ನೀಡಿದರೆ, ಆಕೆಯ ಬೆನ್ನ ಹಿಂದೆಯೇ ಅರ್ಜಿ ಹಿಡಿದು ಕೊಂಡು ನಿಂತ ನೂರಾರು ರೋಗಿಗಳನ್ನು, ನತದೃಷ್ಟ ರನ್ನೂ ಕೊಂದು ಹಾಕಬೇಕಾದಂತಹ ಸನ್ನಿವೇಶ ನಿರ್ಮಾಣವಾಗುತ್ತದೆ. ಭಾರತದಲ್ಲಂತೂ ಜನರಿಗೆ ಬದುಕುವುದಕ್ಕೆ ಇರುವ ಕಾರಣಗಳಿಗಿಂತ ಸಾಯುವುದಕ್ಕೇ ಹೆಚ್ಚು ಕಾರಣಗಳಿವೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಮಿರ್ಝಾಪುರದ ಜೀತ್ ನಾರಾಯಣ್ ಎಂಬವರು ಕುತ್ತಿಗೆ ಯಿಂದ ಕೆಳಗೆ ಪೋಲಿಯೋ ಪೀಡಿತರಾಗಿರುವ ನಾಲ್ವರು ಮಕ್ಕಳ ದಯಾ ಮರಣಕ್ಕೆ ಅರ್ಜಿ ಹಾಕಿದ್ದರು.
ಜಾರ್ಖಂಡ್ನಲ್ಲಿ ಚಿಂದಿ ಆಯುತ್ತಿದ್ದ ಮಚುವಾ ಎಂಬಾತ ಅಪಘಾತಕ್ಕೀಡಾಗಿ, ಪಾರ್ಶ್ವವಾಯು ವಿಗೆ ಒಳಗಾದ. ಆತನೂ ದಯಾಮರಣಕ್ಕೆ ಅರ್ಜಿ ಹಾಕಿದ್ದ. ಹೆಚ್ಚೇಕೆ ಭಾರತದಲ್ಲಿ ಕೃಷಿ ಸಾಲ ದಿಂದ ರೈತರು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಾಳೆ ದೇಶದ ರೈತರೆಲ್ಲ ಒಬ್ಬೊಬ್ಬರಾಗಿದಯಾಮರಣಕ್ಕೆ ಅರ್ಜಿ ಹಾಕಬಹುದು. ರೈತರ ಮೇಲೆ ದಯೆಯೇ ಇಲ್ಲದ ಸರಕಾರಮರಣವನ್ನು ಮಾತ್ರ ಅತ್ಯುತ್ಸಾಹದಿಂದ ದಯಪಾಲಿಸಬಹುದೋ ಏನೋ. ಇನ್ನೂ ಒಂದು ಉದಾಹರಣೆಯನ್ನು ಕೊಡಬಹುದು.
ವಿಶ್ವವಿಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿನ್ಸ್ ದೇಹ ಸ್ಥಿತಿಯೇನು ಎನ್ನುವುದು ಇಡೀ ಜಗತ್ತಿಗೇ ಗೊತ್ತಿದೆ. ಆತನ ಕುತ್ತಿಗೆಯ ಕೆಳಭಾಗ ಚಲಿಸುವುದಕ್ಕೆ ಅಸಾಧ್ಯವಾಗಿದೆ. ಎಲ್ಲಕ್ಕಿಂತಲೂ, ಮಾತನಾಡಲೂ ಆತನಿಗೆ ಸಾಧ್ಯವಿಲ್ಲ. ಅವನ ಸ್ಥಿತಿಗೆ ಆತನ ಪಾಲಕರು ದಯಾಮರಣಕ್ಕೆ ಅರ್ಜಿ ಹಾಕಿದ್ದರೆ ಇಂದು ಜಗತ್ತಿಗೆ ಸರ್ವಶ್ರೇಷ್ಠ ವಿಜ್ಞಾನಿಯೊಬ್ಬನ ನಷ್ಟವಾಗಿ ಬಿಡುತ್ತಿತ್ತು.
ಅರುಣಾರ ಬದುಕು ಅತ್ಯಂತ ಬರ್ಬರವಾಗಿದೆ ನಿಜ. ಆದರೆ ಆಕೆ ನಮ್ಮ ಮಾನವೀಯತೆಗೆ, ನಮ್ಮಳಗಿನ ಕರುಣೆಗೆ, ಸಹನೆಗೆ, ಸತ್ಯಕ್ಕೆ ಸವಾಲಾಗಿದ್ದಾರೆ. ಇರುವಷ್ಟು ದಿನ ಆಕೆಯ ಬದುಕನ್ನು ಎಷ್ಟು ಸಹ್ಯವಾಗಿಸಬಹುದು ಎನ್ನುವುದು ನಮ್ಮ ಹೊಣೆಗಾರಿಕೆ. ನಾವು ಹೊಣೆಗಾರಿಕೆಗೆ ಬೆನ್ನು ಹಾಕಿ ಆಕೆಯನ್ನು ಕೊಂದು ಹಾಕಿದರೆ ಅದು ಮಾನವೀಯತೆಯ ಸೋಲಾಗುತ್ತದೆ. ಆಗ ಸಾಯು ವವರು ಅರುಣಾ ಮಾತ್ರವಲ್ಲ, ನಮ್ಮಾಳಗಿನ ಮನುಷ್ಯತ್ವವೂ ಅರುಣಾರ ಜೊತೆ ಜೊತೆಗೇ ಪ್ರಾಣ ಬಿಡುತ್ತದೆ. ದಯಾಮರಣದ ಹೆಸರಿನಲ್ಲಿ ನಮ್ಮನ್ನು ನಾವೇ ಕೊಂದುಕೊಳ್ಳುವುದು ಎಷ್ಟು ಸರಿ?

No comments:

Post a Comment