Friday 17 June 2011

*ಪ್ರೀತಿ ಅಮರ*ಪ್ರೀತಿ ಮಧುರ* ಹೌದು ನೆನಪಿದೆಯಾ?

ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ ಹುಡುಗಿ ಕೈಕೊಟ್ಳು ಅಂತ..... ಆದರೇ ನನ್ನ  ಕಥೆ
ತುಂಬಾ ದೊಡ್ಡದಾಗಿದೆ ನಾನು ಇಲ್ಲಿ ಸ್ವಲ್ಪ ಮಾತ್ರ ತಿಳಿಸಬಯಸುತ್ತೇನೆ.
*ಪ್ರೀತಿ ಅಮರ*ಪ್ರೀತಿ ಮಧುರ* ಹೌದು ನೆನಪಿದೆಯಾ? ನಿನಗೆ ನಿನ್ನನ್ನು ನೋಡಿದ ಮೊದಲನೇ
ದಿನದಂದೇ ನನ್ನ ಮನದಲ್ಲಿ ನನಗೇ ತಿಳಿಯದ ಏನೋ ಒಂದು ರೀತಿಯ ಮಧುರ ಅನುಭವ. ನನ್ನ
ಪ್ರೀತಿಯನ್ನು ನಿನ್ನಲ್ಲಿ ವ್ಯಕ್ತಪಡಿಸಿದಾಗ ನೀನು ನಿರಾಕರಿಸಿದೆ, ಆಗ ನನ್ನ ಮನದಲ್ಲಿ
ಉಂಟಾದ ನೋವು ಎಂತಹುದೆಂದು ನನಗೇ ಮಾತ್ರ ತಿಳಿದಿತ್ತು. ನೀನು ನನ್ನಲ್ಲಿ ಪ್ರೀತಿಯಿಂದ
ಮಾತನಾಡುತ್ತಿದ್ದೆಯೋ / ಸ್ನೇಹದಿಂದಲೋ / ಬೇಸರವಾದಾಗ ಒಂದು ಮಾತು ಬರುವ ಗೊಂಬೆಯೆಂದು
ತಿಳಿದಿದ್ದೆಯೇನೊ...... ಆದರೆ, ನಾನು ಮಾತ್ರ ನಿನ್ನನ್ನು ಪ್ರೀತಿಯಿಂದಲೇ
ಮಾತನಾಡುತ್ತಿದ್ದೆ.
ನೀನು ಹಲವು ಬಾರಿ ನನ್ನಲ್ಲಿ ಹೇಳಿದ್ದೀ ನನ್ನಗಿಂತ ಒಳ್ಳೇ ಹುಡುಗನನ್ನು ನೋಡಿ
ಮದುವೆಯಾಗು ಎಂದು ಆದರೆ ನೀವು ಒಂದಲ್ಲ ಒಂದು ದಿನ ನನ್ನ ಪ್ರೀತಿಯನ್ನು
ಒಪ್ಪಿಕೊಳ್ಳುತ್ತೀರ, ಪ್ರೀತಿಗೆ ಮನ ಸೋಲದವರ್ಯಾರು ಇಲ್ಲ ಎಂದು ನಿರಂತರ ಪ್ರಯತ್ನ
ಪಡುತ್ತಿದ್ದೆ ನಿನ್ನ ಪ್ರೀತಿ ಪಡೆಯಲು. ಕೊನೆಗೊಂದು ದಿನ ನೀನು ನನ್ನ ಪ್ರೀತಿಯನ್ನು
ಅಂಗೀಕರಿಸಿದೆ. ನೀನು ನನ್ನಲ್ಲಿ ಸಲುಗೆಯಿಂದ ಮಾತನಾಡುವಾಗ, ನನಗೆ ಭರವಸೆ ನೀಡುವ ಹಾಗೆ
ಮಾತನಾಡುವಾಗ ನನ್ನಲ್ಲಿ ನಾನೇ ಅದೆಷ್ಟು ಸಂತೋಷಪಟ್ಟೆನೆಂದು ನಿನಗೆ ತಿಳಿಯದು. ನಿನ್ನ
ಪ್ರೀತಿ ನನಗೆ ಸಿಕ್ಕಿದ್ದು ನನ್ನ ಪುಣ್ಯ ಎಂದು ತಿಳಿದುಕೊಡಿದ್ದೆ. ನಿಮ್ಮನ್ನು ಎಷ್ಟು
ಪ್ರೀತಿಸುತ್ತೇನೆ ಎಂದು ನಿಮಗೆ ಸಹ ತಿಳಿದಿದೆ.
ನನ್ನ ಪ್ರೀತಿ ಎಷ್ಟರ ಮಟ್ಟಿಗೆ ಎಂದರೆ ನಾನು ಪ್ರೀತಿಗಾಗಿ ಏನು ಬೇಕಾದರೂ ಮಾಡಬಲ್ಲೆ,
ಕೊನೆಗೆ ಪ್ರಾಣ ತ್ಯಾಗಕ್ಕೂ ಸಹ ಹಿಂಜರಿಯುವುದಿಲ್ಲ ಎಂದು ನಿನಗೆ ತಿಳಿದಿದೆ. ಆದರೂ,
ಇತ್ತೀಚೆಗೆ ನೀವು ಬೇರೆಯವರನ್ನು ನೋಡಿ ಮದುವೆಯಾಗು ಎಂದು ಹೇಳುವುದು ಅದಕ್ಕೆ ಬೆಂಬಲ
ನೀಡುವಂತೆ ಮಾತನಾಡುವುದು ಸರಿಯೇ? ನಿಮ್ಮನ್ನು ಪ್ರೀತಿಸಿ ಬೇರೆಯವರನ್ನು ಮದುವೆಯಾದರೆ
ಅಲ್ಲಿ ಮೂರು ಜೀವಗಳ ಬಲಿಯಾಗುವುದೆಂದು ನಿಮಗೆ ತಿಳಿಯದೇ? ನೀವೂ ಸಹ ನನ್ನನ್ನು
ಪ್ರೀತಿಸಿದ್ದೀರ ನಿಮಗೆ ನನ್ನನ್ನು ಮರೆಯಲು ಸಾಧ್ಯವೇ? ಎಂದು ನಾನು ನಿಮ್ಮಲ್ಲಿ
ಕೇಳಿದಾಗ ಪ್ರೀತಿ ಮಾಡುವುದು ಸುಲಭ ಹಾಗೆ ಮರೆಯುವುದು ಸುಲಭ, ಬೇರೆಯವರನ್ನು ಮದುವೆ
ಮಾಡಿಕೊಂಡರೆ ತಂತಾನೆ ಮರೆತುಹೊಗುತ್ತೆ  ಎಂದು ನೀವು ಪ್ರೀತಿಯ ಬಗ್ಗೆ ಹೇಳಿದ ಮಾತನ್ನು
ನನಗೆ ಇದುವರೆಗೂ ಮರೆಯಲಾಗುತ್ತಿಲ್ಲ. ನೀವು ಬೇರೆಯವರನ್ನು ಮದುವೆ ಮಾಡಿಕೊಂಡು
ಸಂಪೂರ್ಣ ಪ್ರೀತಿ ನೀಡಲು ಸಾಧ್ಯವೇ? ನಿಮ್ಮ ಹೃದಯದಲ್ಲಿ ಸಂಪೂರ್ಣ ಪ್ರೀತಿ ಆಕೆಯ ಮೇಲೆ
ಇರುವುದೇ? ನಿಮಗೆ ಜೀವನದಲ್ಲಿ ನನ್ನ ನೆನಪೇ ಬಾರದೆ?
ನೀನೇ ನನ್ನ ಮೊದಲನೆಯ ಪ್ರೀತಿ ಎಂದು ಹೇಳಲು ಸಾಧ್ಯವೇ? ನೀನಲ್ಲದೇ ನಾನು ಬೇರೆ
ಯಾರನ್ನು ಪ್ರೀತಿಸಿಲ್ಲ - ಪ್ರೀತಿಸುವುದಿಲ್ಲ ಎಂದು ಹೇಳಲು ಸಾಧ್ಯವೇ? ನನ್ನನ್ನು
ಹೆಚ್ಚಾಗಿ ಪ್ರೀತಿಸಿದವಳನ್ನು - ನಾನು ಪ್ರೀತಿಸಿದವಳನ್ನು ದೂರ ಮಾಡಿಕೊಂಡೆ ಎಂದು
ಅನಿಸದೆ?......... ಮದುವೆ ವಿಚಾರ ಬಂದಾಗ ಮದುವೆಗೆ ಹೆಚ್ಚು ವರದಕ್ಷಿಣೆ ಕೊಡಲು,
ಆಡಂಭರವಾಗಿ ಮದುವೆ ಮಾಡಿಕೊಡಲು ಆಗುವುದಿಲ್ಲ ಎಂದು ತಿಳಿದಾಗ, ನೀವು ನನಗೆ
ಬೇರೆಯವರನ್ನು ಮದುವೆ ಮಾಡಿಕೋ ಎಂದಿರಿ. ಹಣದಿಂದ ನಿಮಗೆ ಪ್ರೀತಿ ಸಿಗುವುದೇ? ನಿಮ್ಮ
ಕಷ್ಟ - ಸುಖದಲ್ಲಿ ಅರ್ಧಾಂಗಿ ಎನಿಸಿಕೊಳ್ಳುವುದು ಒಂದು ಹೆಣ್ಣು - ಹಣವಲ್ಲ.
ಪ್ರೀತಿಗೆ ಹಣವೇ ಮುಖ್ಯವೇ -  ಮನಸ್ಸು ಬೇಡವೇ? ಅಂದರೆ ಪ್ರೀತಿಯಲ್ಲಿ ಮನಸ್ಸಿಗೆ
ಬೆಲೆಯೇ ಇಲ್ಲವೇ?
ಪ್ರೀತಿಗೆ ಬೇಕಾದದ್ದು ಹಣವಾ - ಮನವಾ??
ನಿಮ್ಮ ಸಂತೋಷಕ್ಕಿಂತ ಮಿಗಿಲಾದದ್ದು ಬೇರೆ ಯಾವುದು ಇಲ್ಲ, ನೀವು ಯಾರನ್ನೇ ಮದುವೆಯಾಗಿ
ಚೆನ್ನಾಗಿರಿ, ಎಲ್ಲರೂ ಕೊನೆಗೊಂದು ದಿನ ಈ ಜೀವನಕ್ಕೆ ಮುಕ್ತಾಯ ಹಾಡಲೇ ಬೇಕು, ನಾನು ಈ
ಲೋಕವನ್ನು ತ್ಯಜಿಸಿದಾಗ ನೀವು ಗೊಳೋ ಎಂದು ಅಳದಿದ್ದರೂ----- ನಿಮ್ಮ ಕಣ್ಣಂಚಲ್ಲಿ
ಒಂದು ಹನಿ ಇಣುಕಿದರೆ ಸಾಕು ನನ್ನ ಪ್ರೀತಿ ಸಾರ್ಥಕ.
(ನನಗೆ ಚೆನ್ನಾಗಿ ವರ್ಣಿಸಿ ಬರೆದು ಅಭ್ಯಾಸವಿಲ್ಲ, ಪದಗಳಲ್ಲಿ ಏನಾದರೂ ತಪ್ಪಿದ್ದರೆ ತಿಳಿಸಿ)

No comments:

Post a Comment